ಎಂಸ್ಸನ್, ವಿಲಿಯಮ್

	ಜನನ 1906-1984. ಇಂಗ್ಲಿಷ್ ಕವಿ ಹಾಗೂ ವಿಮರ್ಶಕ. ಯಾರ್ಕ್‍ಶೈರಿನ ಹೌಡನ್ ಎಂಬಲ್ಲಿ ಜನಿಸಿದ. ಕೇಂಬ್ರಿಜ್‍ನಲ್ಲಿ ವಿದ್ಯಾಭ್ಯಾಸ ಮಾಡಿದ. 1931-1953ರ ವರೆಗೆ ಟೋಕಿಯೊ ಮತ್ತು ಪೀಕಿನ್‍ಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿಯೂ ಮಧ್ಯ ಕೆಲವು ವರ್ಷ ಬಿ.ಬಿ.ಸಿ. ಪ್ರಸಾರ ಕೇಂದ್ರದಲ್ಲಿ ಕಲಾವಿದನಾಗಿಯೂ ಕೆಲಸ ಮಾಡಿದ. 1953ರಲ್ಲಿ ಷಫೀಲ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾದ. ಈತ ಮೂರು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾನೆ. ಪೊಯೆಮ್ಸ್ (1935), ದಿ ಗ್ಯಾದರಿಂಗ್ ಸ್ಟಾರಮ್(1940) ಮತ್ತು ಕಲೆಕ್ಟೆಡ್ ಪೊಯೆಮ್ಸ್ (1935). ಅನೇಕ ವಿಷಯಗಳನ್ನು ಅಡಕವಾಗಿ, ಸಂಕ್ಷೇಪವಾಗಿ ಹೇಳುವುದೇ ಇವನ ಕಾವ್ಯಶೈಲಿ. ಒಳ್ಳೆಯ ವಿಮರ್ಶಕನೆಂದು ಇಂಗ್ಲೆಂಡಿನಲ್ಲಿ ಮಾತ್ರವಲ್ಲದೆ ಹೊರಗೂ ಹೆಸರುವಾಸಿಯಾಗಿದ್ದಾನೆ. ಇವನ ಕಾವ್ಯಗಳಲ್ಲಿ ಆಧ್ಯಾತ್ಮಿಕತೆ ಇದೆ.

	ಇವನ ಕವನಗಳೇ ವಿಮರ್ಶೆ, ವಿಮರ್ಶೆಯೇ ಕವನ- ಹೀಗೆ ಇವನದೊಂದು ವಿನೂತನ ಶೈಲಿ. ಇವನ ಕವನಗಳಲ್ಲಿ ನಿರಾಶಾವಾದವೇ ಹೆಚ್ಚಾಗಿ ಕಂಡುಬಂದರೂ ಅಲ್ಲಲ್ಲಿ ಸಿಗುವ ಯಥಾರ್ಥವಾದ ಹಾಗೂ ಮಾನವಶಕ್ತಿ ಇವನಿಗೆ ಇಂಗ್ಲಿಷ್ ಕವಿಗಳಲ್ಲಿ ಅಮರತ್ವವನ್ನು ಒದಗಿಸಿಕೊಟ್ಟಿದೆ.

	ಸೆವೆನ್ ಟೈಪ್ಸ್ ಆಫ್ ಆಂಬಿಗ್ಯುಯಿಟಿ (1930) ದಿ ಸ್ಟ್ರಕ್ಚರ್ ಆಫ್ ಕಾಂಪ್ಲೆಕ್ಸ್ ವಡ್ರ್ಸ್(1951)- ಇವು ಈತನ ವಿಮರ್ಶಾಗ್ರಂಥಗಳು.											(ವಿ.ಪಿ.)

	ಎಂಸ್ಸನ್ ಕೇಂಬ್ರಿಜ್‍ನಲ್ಲಿ ಪ್ರಸಿದ್ಧ ನವ್ಯ ವಿಮರ್ಶಕ ಐ.ವಿ. ರಿಚಡ್ರ್ಸ್‍ನ ವಿದ್ಯಾರ್ಥಿ, ರಿಚಡ್ರ್ಸ್ ಕಾವ್ಯದಲ್ಲಿ ಭಾಷೆಯ ಪಾತ್ರವನ್ನು ವಿಶ್ಲೇಷಿಸಿದ ಬಗೆಯಿಂದ ಪ್ರಭಾವಿತನಾದ. ಸೆವೆನ್ ಟೈಪ್ಸ್ ಆಫ್ ಆ್ಯಂಟಿಸ್ಟುರ್ಯಿ ಅಲ್ಲದೆ ಸಮ್ ವರ್ಷನಸ್ ಆಫ್ ದ ಪ್ಲಾಸ್ಟೊರಲ್, (1935) ದ ಸ್ಟ್ರಕ್ಚರ್ ಆಫ್ ಕಂಪ್ಲೀಟ್ ವಡ್ರ್ಸ್ (1951) ಮತ್ತು ಮಿಲ್ಟನ್ ಗಾಡ್ (1961) ಎನ್ನುವ ಕೃತಿಗಳನ್ನು ಬರೆದಿದ್ದಾನೆ. ಅವನು ತೀರಿಕೊಂಡ ನಂತರ ಯೂಸಿಂಗ್ ಬಯಾಗ್ರಫಿ (1984) ಪ್ರಕಟವಾಯಿತು.

	ಪ್ರಸಿದ್ಧ ಕೃತಿ ಸೆವೆನ್ ಟೈಪ್ಸ್ ಆಫ್ ಆಂಬಿಗ್ಯುಯಿಟಿ ಬರೆದಾಗ ಎಂಸ್ಸನನಿಗೆ 24 ವರ್ಷ. ಇಲ್ಲಿ ಆಂಬಿಗ್ಯುಯಿಟಿ ಎನ್ನುವ ಪದದ ಬಳಕೆ ಸೂಕ್ತವಲ್ಲ; ಈ ಪದದ ಅರ್ಥ ಅರ್ಥಸಂಧಿಗ್ಧತೆ. ವಾಸ್ತವವಾಗಿ ಎಂಸ್ಸನ್ ವಿವರಿಸುವುದು ಮಲ್ಟಿಪಲ್ ಮೀನಿಂಗ್-ಹೀಗೆ ಒಂದು ಸಾಹಿತ್ಯ ಕೃತಿಗೆ ಒಂದೇ ನಿರ್ದಿಷ್ಟ ಅರ್ಥ ಇರಬೇಕಾಗಿಲ್ಲ. ಅದರಲ್ಲಿ ಮಲ್ಟಿಪಲ್ ಮೀನಿಂಗ್-ಅರ್ಥದ ಹಲವು ಪದರಗಳು ಇರುವುದು ಸಾಧ್ಯ ಎಂದು. ಆಂಬಿಗ್ಯುಯಿಟಿ ತಳೇ ಎಂದೇನೂ ಅವನು ಸಾಧಿಸುವುದಿಲ್ಲ. ಅವನು ಗುರುತಿಸುವ ಏಳು ಬಗೆಗಳ ಆಂಬಿಗ್ಯುಯಿಟಿ ಇದು.

	1. ಒಂದು ಪದ ಅಥವಾ ವಾಕ್ಯರಚನೆ ಒಂದೇ ಕಾಲದಲ್ಲಿ ಹಲವು ರೀತಿಗಳಲ್ಲಿ ಪರಿಣಾಮಕಾರಿಯಾಗಬಹುದು.

	2. ಎರಡು ಅಥವಾ ಹೆಚ್ಚು ಅರ್ಥಗಳು ಒಂದುಗೂಡಿ ಬರಹಗಾರನ ಒಂದು ಅರ್ಥ ಆಗಬಹುದು.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ